Shri Adi Shankara's Prashnottara Ratna Malika (Kannada) |
ಪೂಜ್ಯರೇ ಯಾವುದನ್ನು ಪಡೆಯಬೇಕು ?
>ಗುರು ಹಿರಿಯರ ಮಾತನ್ನು ಮಾರ್ಗದರ್ಶನವನ್ನು ಪಡೆಯಬೇಕು .
ಹಿತಕರವಾದದ್ದು ಯಾವುದು ?
>ಧರ್ಮವು (ಕರ್ತವ್ಯವು ) ಹಿತಕರವಾದದ್ದು.
ವಿಷವು ಯಾವುದು ?
>ಗುರು-ಹಿರಿಯರಿಗೆ ಮಾಡಿದ ಅವಮಾನ,ಅಗೌರವವೇ ವಿಷವು
ಮನುಷ್ಯನಲ್ಲಿ ಹೆಚ್ಚಾಗಿ ಅಪೇಕ್ಷಿಸುವುದು ಯಾವುದು ?
>ತನ್ನ ಮತ್ತು ಇತರರ ಒಳ್ಳೆಯದರಲ್ಲಿ ತೊಡಗಿಸಿದ ಜೀವನವು ಮಾನವನಲ್ಲಿ
ಹೆಚ್ಚು ಅಪೇಕ್ಷಿತ .
ಮತ್ತೆ ಕಳ್ಳರು ಯಾರು ?
>ಸುಖಪಭೋಗ ವಸ್ತುಗಳೇ ಕಳ್ಳರು (ಅವು ಇಂದ್ರಿಯಗಳ ಮೂಲಕ ಮನಸನ್ನು
ಅಪಹರಿಸುತ್ತವೆ
ವ್ಯೆರಿಯು ಯಾರು ?
>ನಿರುದ್ಯೋಗವೇ (ಕೆಲಸವಿಲ್ಲದಿರುವುದೇ) ವ್ಯೆರಿಯು .
ಘನತೆಯ ಮೂಲವು ಯಾವುದು ?
>ಬೇಡದೇ ಇರುವುದೆಂಬುದೇ ಘನತೆಯ ಮೂಲವು (ಇತರರನ್ನು ಯಾವುದನ್ನೂ ಬೇಡುವುದು )
ಯಾವುದಕ್ಕೆ ದುಃಖ ವೆನ್ನಬೇಕು ?
>ಸಂತೋಷ ವಿಲ್ಲದಿರುವುದೇ ದುಖವು
ಆಲಸ್ಯತನವು ಯಾವುದು ?
>ನಿಪುಣನಾದವನು (ವಿದ್ವಾಂಸ ನಾದವನು )ಅಧ್ಯಯನ ಮಾಡದಿರುವುದು ಆಲಸ್ಯ
ಕಮಲದ ಎಲೆಯ ಮೇಲಿನ ನೀರಿನಂತೆ ಚಂಚಲವಾದದ್ದು ಯಾವುದು ?
>ತಾರುಣ್ಯ,ಸಂಪತ್ತು ಮತ್ತು ಆಯುಷ್ಯ ಇವು ಕಮಲದ ಎಲೆ ಮೇಲಿನ ನೀರಿನಂತೆ ಚಂಚಲವಾದದ್ದು (ಅನಿಷ್ಟಿತ ವಾದದ್ದು )
ಬೆಲೆ ಕಟ್ಟಲಾಗದ್ದು ಯಾವುದು ?
> ಸರಿಯಾದ ಸಂದರ್ಭ ಕೊಟ್ಟಿದ್ದು
ಸಾಯುವವರೆಗೂ ಬಾಣದಂತೆ ಚುಚ್ಚುತ್ತಲೇ ಇರುವುದು ಯಾವುದು ?
>ಬಚ್ಚ್ಚಿಟ್ಟು ಕೊಂಡ ಪಾಪಕಾರ್ಯವು ಸಾಯುವವರೆಗೂ ಬಾಣದಂತೆ ಚುಚ್ಚತ್ತಲೇ ಇರುತ್ತದೆ .
ಯಾವ ವಿಷಯದಲ್ಲಿ ಪ್ರಯತ್ನವನ್ನು ಮಾಡಬೇಕು ?
>ವಿಧ್ಯಾಭ್ಯಾಸದಲ್ಲಿ ,ಒಳ್ಳೆಯ ಔಷದೊಪಚಾರದಲ್ಲಿ ಮತ್ತು ದಾನ ಮಾಡುವಲ್ಲಿ ಪ್ರಯತ್ನ ಮಾಡಬೇಕು
ಈ ಜಗತ್ತನ್ನು ಯಾರು ಗೆಲ್ಲುತ್ತಾರೆ ?(ವಿಶ್ವದಲ್ಲಿ ಯಶಸ್ಸನ್ನು ಹೊಂದುವವರು ಯಾರು)
> ಸತ್ಯ ಮತ್ತು ಸಹನೆ ಗಳಿಂದ ಕೂಡಿದ ಮನುಷ್ಯನು ಈ ಜಗತ್ತನ್ನು ಗೆಲ್ಲುತ್ತಾನೆ
ಪ್ರಾಣಿ ಸಮೂಹವು ಯಾರ ಅಧೀನದಲ್ಲಿರುತ್ತದೆ ?
>ಪ್ರಾಣಿ ಸಮೂಹವು ಸತ್ಯವದುದನ್ನು ಮತ್ತು ಪ್ರಿಯವಾದುದನ್ನು ಮಾತನಾಡುವ ವಿನಯಶಾಲಿಯ ವಶದಲ್ಲಿ ಇರುತ್ತದೆ
ಎಲ್ಲಿ ಸ್ಥಿರವಾಗಿ ನಿಲ್ಲಬೇಕು ?
>ದೃಷ್ಟ ಮತ್ತು ಅದೃಷ್ಟ (ಕಂಡು ಕಾಣದ )ಲಾಭದಿಂದ ಸಮೃದ್ಧವಾದ ನ್ಯಾಯಯುತವಾದ ಮಾರ್ಗ ದಲ್ಲಿ ಸದಾ ಉಳಿಯಬೇಕು
ದಾನವು ಯಾವುದು ?
ಪ್ರತಿಯಾಗಿ ಏನನ್ನೂ ಬಯಸದೆ ಮಾಡಿದ ದಾನವೇ ನಿಜವಾದ ದಾನವು .
(ನಿಜವಾದ) ಮಿತ್ರನು ಯಾರು ?
ಪಾಪ ಕಾರ್ಯಗಳನ್ನು ಮಾಡದಂತೆ ತಡೆಯುವನು ನಿಜವಾದ ಮಿತ್ರನು.
ದುಃಖಕರವಾದುದು ಯಾವುದು ?
ದಾರಿದ್ರ್ಯವು (ಬಡತನವು) ಕಷ್ಟಕರವಾದದ್ದು (ದುಃಖಕರವಾದದ್ದು)
ಎಂಥ ದೇಶದಿಂದ ದೂರ ಇರಬೇಕು ?
ಕ್ರೂರರಾದ ಪ್ರಜೆಗಳುಳ್ಳ ಮತ್ತು ಲೋಭಿಯಾದ ರಾಜನುಳ್ಳ ದೇಶವನ್ನು ತೊರೆಯಬೇಕು
ವಿಶ್ವದಲ್ಲಿ ಶೋಚನೀಯನು ಯಾರು ?
ಸಂಪತ್ತು ಇದ್ದರೂ ದಾನಿಯಾಗಿರದವನು ಶೋಚ್ಯನು
ಹಗಲಿರುಳು (ಸದಾಕಾಲವೂ )ಯಾವುದನ್ನು ಕುರಿತು ಚಿಂತಿಸಬೇಕು ?
ಹಗಲಿರುಳು ಪರಮಾತ್ಮನ ಚರಣದ ಚಿಂತೆ ಮಾಡಬೇಕೇ ವಿನಃ ಸಂಸಾರವನ್ನಲ್ಲ .
ಮಾನವರು ಏನನ್ನು ಸಂಪಾದಿಸಬೇಕು ?
ಮಾನವರು ವಿದ್ಯೆ ,ಸಂಪತ್ತು ,ಬಲ ,ಕೀರ್ತಿ ಮತ್ತು ಪುಣ್ಯಗಳನ್ನು ಸಂಪಾದಿಸಬೇಕು .
ಎಲ್ಲ ಗುಣಗಳನ್ನು ನಾಶಪಡಿಸುವಂಥಹದು ಯಾವುದು ?
ಲೋಭವು ಸರ್ವ ಗುಣಗಳನ್ನು ನಾಶ ಪಡಿಸುವಂತಹದು
ಎಲ್ಲ ಗುಣಗಳನ್ನು ನಾಶಪಡಿಸುವಂಥಹುದು ಯಾವುದು ?
>ಲೋಭವು ಎಲ್ಲಾ ಒಳ್ಳೆ ಯ ಗುಣಗಳನ್ನೂ ನಾಶಪಡಿಸುವಂತಹುದು .
ವೈರಿಯು ಯಾರು ?
ಕಾಮವೇ ವೈರಿಯು .
೨೮
ಸಂರಕ್ಷಿ ಸಲ್ಪಡತಕ್ಕಂಥಹದು ಯಾವುದು ?
>ಕೀರ್ತಿ ,ಪತಿವ್ರತೆ ಮತ್ತು ಸ್ವಂತ ಬುದ್ಧಿ (ಸ್ವಂತ ವಿಚಾರ ಶಕ್ತಿ ) ಇವು ಸಂ ರಕ್ಷಿಸಲು ಅರ್ಹ .
ಜಗತ್ತಿನ್ನಲ್ಲಿ ಕಲ್ಪಲತೆ ಯಾವುದು ?(ಬೇಡಿದ್ದನ್ನು ,ಬಯಸಿದ್ದನ್ನು ಕೊಡುವ ಬಳ್ಳಿ )
>ಒಳ್ಳೆಯ ಶಿಷ್ಯನಿಗೆ ಗುರುವು ನೀಡಿದ ವಿದ್ಯೆಯು ಜಗತ್ತಿನ್ನಲ್ಲಿ ಕಲ್ಪಲತೆಯು .
ಪಾತಕವು ಯಾವುದು ?
>ಹಿಂಸೆಯೇ(ಕ್ರೂರತೆ) ಪಾತಕವು.
ಒಳ್ಳೆಯವನಿಗೆ ಸಾವಿಗಿಂತಲೂ ಹೆಚ್ಚು ದುಃಖದಾಯಕ ಯಾವುದು ?
>ಅಪಕೀರ್ತಿಯು ಮರಣ ಕಿಂತಲೂ ಹೆಚ್ಚು ದುಃಖದಾಯಕ.
ಯಾರು ಪ್ರಗತಿ ಯನ್ನು ಹೊಂದುತ್ತಾರೆ ?
>ವಿನಮ್ರ ನಾದವನು (ವಿನಯಶಾಲಿಯು ) ಪ್ರಗತಿಯನ್ನು ಹೊಂದುತ್ತಾನೆ .
ದೇಹಿಗಳಿಗೆ (ಮನುಷ್ಯರಿಗೆ) ಭಾಗ್ಯವು ಯಾವುದು ?
>ಆರೋಗ್ಯವೇ ಭಾಗ್ಯವು .
ಎಲ್ಲರ ಬದುಕಿಗೆ ಕಾರಣನು ಯಾರು ?
>ಪರ್ಜನ್ಯನು (ಮಳೆ ) ಸಮಸ್ತ ರ ಬದುಕಿಗೆ ಕಾರಣನು .
ಶೂರನು ಯಾರು ?
> ಭೀತನಾದವನನ್ನು ಕಾಪಾಡುವವನು ಶೂರನು .
ಮತ್ತೆ ಕಾಪಾಡುವವನು ಯಾರು ?
>ರಕ್ಷಿಸುವ ಗುರುವು .
ಪ್ರತ್ಯಕ್ಷ(ಸಾಕ್ಷಾತ್ ) ದೇವತೆ ಯಾರು ?
>ತಾಯಿಯೇ ಪ್ರತ್ಯಕ್ಷ ದೇವತೆಯು .
ಪೂಜ್ಯ ಗುರುವು ಯಾರು ?
ತಂದೆಯೇ ಪೂಜ್ಯ ಗುರುವು .
ಅನ್ನದಾನಕ್ಕೆ ಅರ್ಹನಾರು ?
>ಹಸಿದವನು ಅನ್ನದಾನಕ್ಕೆ ಅರ್ಹನು .